kalpavruksha kshetra
kalpavruksha kshetra

About Us

'ಕೆರೆಯ ನೀರನು ಕೆರೆಗೆ ಚೆಲ್ಲಿ' ಎನ್ನುವ ಹರಿದಾಸರ ವಾಣಿಯಂತೆ ಭಗವಂತನೇ ಕರುಣಿಸುವ, ಅವನದೇ ಸಂಪತ್ತನ್ನು ಅವನಿಗೇ ಸಮರ್ಪಿಸುವ ವಿನೀತ ಭಾವ ಹೊಂದಿರುವವರು ಸಮಾಜದಲ್ಲಿ ಅತ್ಯಂತ ದುರ್ಲಭ. ಎಷ್ಟಿದ್ದರೂ ಸಾಲದು, ಏನಿದ್ದರೂ ಸಾಲದು, ಎಲ್ಲವೂ ನನಗೇ ಇರಲಿ ಎನ್ನುವ ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ, ಬಂದದ್ದೆಲ್ಲವೂ ಅವನಿಂದ, ಬರುವುದೆಲ್ಲವೂ ಆತನಿಂದ, ಅವನ ಆಣತಿ ಏನಿದೆಯೋ ಹಾಗೇ ನಡೆದುಕೊಳ್ಳುವುದಕ್ಕಷ್ಟೇ ನಾವು ನಿಮಿತ್ತ ಎನ್ನುವ ಅತ್ಯಂತ ವಿನಮ್ರ ಭಾವದಲ್ಲಿ ಮೂಡಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಸಂಕಲ್ಪದ ನಿಸ್ಪೃಹ ಸಂಸ್ಥೆ ಕಲ್ಪವೃಕ್ಷ ಫೌಂಡೇಶನ್. ಮೈಸೂರಿನ ನಿರ್ಮಾಣ್ ಪ್ರಮೋಟರ್ಸ್ ಸಂಸ್ಥೆಯಿಂದ ಸ್ಥಾಪಿತವಾಗಿರುವ ಕಲ್ಪವೃಕ್ಷ ಫೌಂಡೇಶನ್ಗೆ ಈಗಿನ್ನೂ 3ರ ಹರೆಯ. ಆದರೆ, ಅದರದ್ದು 30ರ ಸಾಧನೆ.

ದೇವಸ್ಥಾನಗಳಲ್ಲಿ, ಮಠಮಂದಿರಗಳಲ್ಲಿ, ಕಛೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ ನಿರ್ಮಾಣ್ ಪ್ರಮೋಟರ್ಸ್ರವರ ಕಲ್ಪವೃಕ್ಷ ಫೌಂಡೇಶನ್ ಸಿದ್ಧಪಡಿಸಿದ ಶ್ರೀ ಗುರುರಾಘವೇಂದ್ರರ ಭಾವಚಿತ್ರವೋ, ಚಿತ್ರಪಟವೋ, ಗಡಿಯಾರವೋ, ಕ್ಯಾಲೆಂಡರ್ ಇದ್ದೇ ಇರುತ್ತದೆ. ಎಲ್ಲಿ ನಗುಮೊಗದ ರಾಯರು, ಕಲಿಯುಗದ ಕಾಮಧೇನು ಹಸನ್ಮುಖಿಗಳಾಗಿ ಹರಸುವ ಭಾವಚಿತ್ರ ಕಂಡುಬಂದರೆ ಅದು ಕಲ್ಪವೃಕ್ಷ ಫೌಂಡೇಶನ್ನ ಹೆಮ್ಮೆಯ ಕೊಡುಗೆಯಲ್ಲದೇ ಮತ್ತೇನೂ ಅಲ್ಲ. ಮಂತ್ರಾಲಯದ ಪ್ರಭುಗಳು ಇವರನ್ನು ಅನುಗ್ರಹಿಸಿರುವ ರೀತಿಯೇ ಅನುಪಮ. ನಂಬಿ ಕೆಟ್ಟವರಿಲ್ಲವೋ ಈ ಗುರುಗಳ... ಎಂದು ಎಲ್ಲೆಡೆ ಎಲ್ಲದರಲ್ಲೂ ಉದ್ಘೋಷಿಸುವ ರಾಯರ ಪರಮಭಕ್ತರಾದ ಶ್ರೀಯುತ ನಾಗೇಂದ್ರ ಮತ್ತು ಇವರ ಸಹವರ್ತಿಗಳು ಭಕ್ತಿ ಶ್ರದ್ಧೆಗಳಿಗೆ ಸರಿಸಾಟಿಯೇ ಇಲ್ಲ. ಯಾವುದನ್ನೂ ಕೊಡುಗೆ ಎಂದು ಬೀಗದೆ, 'ದೇವರ ಸೇವೆ' ಎಂದು ವಿನಮ್ರವಾಗಿ ನುಡಿಯುವ ಇವರ ಕಾಯಕದ ಹಿಂದಿನ ಪ್ರೇರಕ ಶಕ್ತಿ, ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರುಸಾರ್ವ ಭೌಮರು.

ಅಂದು ರಾಯರ 342ನೆಯ ಆರಾಧನೆಯ ಸಂದರ್ಭ. ಮನೆಯಲ್ಲೇ ಭಕ್ತಿ-ಶ್ರದ್ಧೆಗಳಿಂದ ಪೂಜೆ ನಡೆಯುತ್ತಿದೆ. ಓರ್ವ ಚಿಂದಿ ಬಟ್ಟೆಯ ಅಪರಿಚಿತ ಬಂದಿರುತ್ತಾನೆ. ಹಣ, ವಸ್ತ್ರ ಯಾವುದನ್ನೂ ಸ್ವೀಕರಿಸದೇ ಊಟ ಬೇಕು ಎಂದು ಸಂಜ್ಞೆ ಮಾಡುತ್ತಾನೆ. ಮನೆಯವರಿಗಾಗಿ ಸಿದ್ಧಪಡಿಸಿದ್ದ ಉಪಾಹಾರ ನೀಡಲಾಗುತ್ತದೆ. ಮತ್ತೆ ಮತ್ತೆ ಕೇಳಿ ತಿಂದು ನೀರನ್ನೂ ಕುಡಿಯದೇ ಹೊರಟುಹೋದ ಅಲೆಮಾರಿ ತುಸುದೂರ ಹೋದನಂತರ ಕಣ್ಮರೆಯಾಗುತ್ತಾರೆ. ಇದನ್ನು ರಾಯರು ಆಜ್ಞಾಪಿಸಿದ ಅನ್ನದಾನದ ಸೂಚನೆ ಎಂದೇ ಭಾವಿಸಿದ ಶ್ರೀಯುತ ನಾಗೇಂದ್ರ ಹಾಗೂ ಸಹವತರ್ಿಗಳು ನಿತ್ಯ ಅನ್ನದಾನದ ಸಂಕಲ್ಪ ಮಾಡುತ್ತಾರೆ. ಇಂದು ವರುಣ ಹೋಬಳಿ ಜಂತಗಳ್ಳಿ ಗ್ರಾಮದ ನಿರ್ಮಾಣ್ ನಗರದಲ್ಲಿ ಸುತ್ತಮುತ್ತಲಿನ ಬಹುತೇಕ ಗ್ರಾಮಸ್ಥರಿಗೆ ಮಧ್ಯಾಹ್ನ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮಸ್ಥರು ಇದನ್ನು ರಾಯರ ಪ್ರಸಾದವೆಂದು ಭಕ್ತಿಪೂರ್ವಕವಾಗಿ ಸ್ವೀಕರಿಸುತ್ತಾರೆ.

ಕಲ್ಪವೃಕ್ಷ ಫೌಂಡೇಷನ್, ಇಂದು ಅನೇಕ ಚಟುವಟಿಕೆಗಳ ಮೂಲಕ ರಾಜ್ಯದ ಶಕ್ತಿಯಾಗಿ ಉದಯಿಸುತ್ತಿದೆ. 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಉಚಿತ ನೋಟ್ಪುಸ್ತಕಗಳ ವಿತರಣೆ, ಮಠಮಂದಿರಗಳಿಗೆ ಗೋಡೆ ಗಡಿಯಾರ, ಭಾವಚಿತ್ರಗಳು ಹಾಗೂ ಕ್ಯಾಲೆಂಡರ್ಗಳನ್ನು ವಿತರಿಸಿ, ರಾಜ್ಯಾದ್ಯಂತ ಮನೆಮಾತಾಗಿದೆ. ಈ ವರ್ಷದ ಆರಾಧನಾ ಮಹೋತ್ಸವಕ್ಕೆ ಕಲ್ಪವೃಕ್ಷ ಫೌಂಡೇಷನ್ ಒಂದು ವಿನೂತನ ಯೋಜನೆಯನ್ನೇ ರೂಪಿಸಿದ್ದು, ರಾಜ್ಯ ಹಾಗೂ ಹೊರರಾಜ್ಯದ ಎಲ್ಲಾ ರಾಯರ ಮಠಗಳಿಗೆ, ರೇಷ್ಮೆ ಮಡಿ, ಅಲಂಕಾರ ವಸ್ತ್ರ, ಫೋಟೋ ಕಾರ್ಡ್ಗಳನ್ನು ತಲುಪಿಸಿಸಲಾಗಿದೆ. ನಿರ್ಮಾಣ್ ನಗರದಲ್ಲಿ ಶ್ರೀ ರಾಘವೇಂದ್ರ ಮಠವನ್ನು ನಿರ್ಮಿಸಿಸಲಾಗುತ್ತಿದೆ. ಇದನ್ನು ಸಾಮಾಜಿಕ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವನ್ನಾಗಿಸುವ ಪ್ರಯತ್ನ ಭರದಿಂದ ಸಾಗಿದೆ. ಇದಲ್ಲದೆ 108 ಕೋಟಿ ಶ್ರೀ ರಾಮ, ಶ್ರೀ ರಾಘವೇಂದ್ರ ನಾಮಲೇಖನ ಮಹಾಯಜ್ಞನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಲೇಖನ ಪುಸ್ತಕಗಳನ್ನು ರಾಜ್ಯಾದ್ಯಂತ ವಿತರಿಸುವ ಹಾಗೂ ಬರೆದ ಪುಸ್ತಕಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಈಗ ಬಡಾವಣೆಯಲ್ಲಿ ನಡೆಯುತ್ತಿರುವ ಅನ್ನದಾನದ ಯೋಜನೆಯನ್ನು ಸದ್ಯದಲ್ಲಿಯೇ ಸುತ್ತಮುತ್ತಲಿನ ಗ್ರಾಮಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಭವಿಷ್ಯದಲ್ಲಿ ವೃದ್ಧಾಶ್ರಮ, ವಸತಿ ನಿಲಯ, ಹಾಗೂ ಕಲ್ಪವೃಕ್ಷ ವಿದ್ಯಾಪೀಠ ಸ್ಥಾಪನೆಯ ಮೂಲಕ ಅಕ್ಷರ ದಾಸೋಹವನ್ನು ನಡೆಸಲು ಉದ್ದೇಶಿಸಲಾಗಿದೆ.

ಇವುಗಳಲ್ಲದೆ, ಅಶಕ್ತರ ಅಂತ್ಯೇಷ್ಟಿಯನ್ನು ನಡೆಸುವ ಯೋಜನೆಯೂ ಇದೆ.

ಎಲ್ಲಕ್ಕೂ ರಾಯರದೇ ಪ್ರೇರಣೆ. ರಾಯರ ಯೋಜನೆ-ಯೋಚನೆ, ಅದಕ್ಕಾಗಿ ಕಲ್ಪವೃಕ್ಷ ಫೌಂಡೇಷನ್ನ ಸಂಪೂರ್ಣ ಸಮರ್ಪಣೆ. ಕಲ್ಪವೃಕ್ಷ ಫೌಂಡೇಷನ್ನ ಈ ಪ್ರಯತ್ನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ಶ್ರೀ ರಾಯರ ಕೃಪೆಗೆ ಪಾತ್ರರಾಗಬೇಕೆಂಬುದು ನಮ್ಮ ಆಶಯ.

ಈ ಮೇಲೆ ಕಾಣಿಸಿರುವ ಸತ್ಕಾರ್ಯಗಳಾದ ಅನ್ನದಾನ, ವಿದ್ಯಾದಾನ, ಶ್ರೀ ರಾಮ-ಶ್ರೀ ರಾಘವೇಂದ್ರ ಲೇಖನ ಮಹಾಯಜ್ಞ ಮುಂತಾದ ಸತ್ಕಾರ್ಯಗಳು ಈಗಾಗಲೆ ದೊಡ್ಡ ಪ್ರಮಾಣದಲ್ಲಿ ನೆಡೆಯುತ್ತಿದ್ದು ಮುಂಬರುವ ದಿನಗಳಲ್ಲಿ ವೃದ್ಧಾಶ್ರಮ, ವಿದ್ಯಾಪೀಠ, ಆಸ್ಪತ್ರೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ಬೃಹತ್ಪ್ರಮಾಣದಲ್ಲಿ ಕೈಗೊಳ್ಳಲು ಆಸಕ್ತ ಭಕ್ತರು ಧನ, ಧಾನ್ಯ, ವಸ್ತುರೂಪದಿಂದ ನೆರವಾಗುವುದರ ಮೂಲಕ ಶ್ರೀರಾಯರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. ದೇಣಿಗೆಯನ್ನು ಕೊಡಲಿಚ್ಛಿಸುವವರು ಖುದ್ದಾಗಿ ಅಥವ ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.

KALPAVRUKSHA FOUNDATION
SB A/c No.17252010028830
SYNDICATE BANK, Siddharthanagar Branch, Mysuru
IFSC Code : SYNB0001725

Donations can also be remitted to the above account.

Twitter Facebook Linkedln Google+