Welcome
'ಕೆರೆಯ ನೀರನು ಕೆರೆಗೆ ಚೆಲ್ಲಿ' ಎನ್ನುವ ಹರಿದಾಸರ ವಾಣಿಯಂತೆ ಭಗವಂತನೇ ಕರುಣಿಸುವ, ಅವನದೇ ಸಂಪತ್ತನ್ನು ಅವನಿಗೇ ಸಮರ್ಪಿಸುವ ವಿನೀತ ಭಾವ ಹೊಂದಿರುವವರು ಸಮಾಜದಲ್ಲಿ ಅತ್ಯಂತ ದುರ್ಲಭ. ಎಷ್ಟಿದ್ದರೂ ಸಾಲದು, ಏನಿದ್ದರೂ ಸಾಲದು, ಎಲ್ಲವೂ ನನಗೇ ಇರಲಿ ಎನ್ನುವ ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ, ಬಂದದ್ದೆಲ್ಲವೂ ಅವನಿಂದ, ಬರುವುದೆಲ್ಲವೂ ಆತನಿಂದ, ಅವನ ಆಣತಿ ಏನಿದೆಯೋ ಹಾಗೇ ನಡೆದುಕೊಳ್ಳುವುದಕ್ಕಷ್ಟೇ ನಾವು ನಿಮಿತ್ತ ಎನ್ನುವ ಅತ್ಯಂತ ವಿನಮ್ರ ಭಾವದಲ್ಲಿ ಮೂಡಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಸಂಕಲ್ಪದ ನಿಸ್ಪೃಹ ಸಂಸ್ಥೆ ಕಲ್ಪವೃಕ್ಷ ಫೌಂಡೇಶನ್. ಮೈಸೂರಿನ ನಿರ್ಮಾಣ್ ಪ್ರಮೋಟರ್ಸ್ ಸಂಸ್ಥೆಯಿಂದ ಸ್ಥಾಪಿತವಾಗಿರುವ ಕಲ್ಪವೃಕ್ಷ ಫೌಂಡೇಶನ್ಗೆ ಈಗಿನ್ನೂ 3ರ ಹರೆಯ. ಆದರೆ, ಅದರದ್ದು 30ರ ಸಾಧನೆ. View more...